|
South
Indian Inscriptions |
|
|
TEXT OF INSCRIPTIONS
12 ದಿ ಪಿತಾಮಹ ಸಕಲ ವಿದ್ವಜ್ಜನ ಚಕ್ರವರ್ತ್ತಿ ಶ್ರೀಮದ್ವರ್ದ್ಧಮಾನ ಭಟ್ಟಾರಕ
ದೇವರುಗಳಿಗೆ ವೊಡವಟ್ಟು ಕೊಟ್ಟ |
13 ಧರ್ಮ್ಮ ಶಾಸನ ಬಾರಕೂರ ನಾಡೊಳಗಣ ವರಾಂಗ ತೀರ್ತ್ಥದ ನೇಮಿನಾಥ
ಸ್ವಾಮಿಗಳ್ಗೆ ಪೂರ್ವದಲ್ಲಿ ಸರ್ವ್ವಮಾ – |
14 ನ್ಯವಾಗಿ ಸಲುವ ವರಾಂಗದ ಗ್ರಾಮದಲು ಅರಮನೆಗೆ ಯತ್ತುವ ಕುಳ
ಮೊದಲು ಕಾಟಿಯ ಹಂನೆರಡು |
15 ಹೊಂನು ಆ ಹನ್ನೆರಡು ಹೊನ್ನಿನ ಬೆಂಬಳಿಯಲಿ ಯತ್ತವ ಹ[ಟಿ]ಕೆ .
ಮಲವ್ರಯ ಅಧಿಕಾರಿ ಸೇನಬೋವರ |
16 ಜೋಡಿ ವರ್ತ್ತನೆ ಉಗ್ರಾಣಿ ಬಿದ್ದುಂಬಿಯ ಸಹಿತವಾಗಿ ಯತ್ತು ವಂಥಾ
ಯತ್ತುವಳಿ ಯೆಲ್ಲವನೂ ಬಿಟ್ಟು |
17 ಶಕವರ್ಶ 1346 ನೆಯ ಕೋಧಿ ಸಂವತ್ಸರದ ಪುಷ್ಯಶುದ್ಧ ಷಷ್ಟಿಯೂ
ಬುಧವಾರ ಮಕರ ಸಂಕ್ರಾಂತಿಯ ಪು – |
18 ಣ್ಯಕಾಲದಲು ವರಾಂಗ ಗ್ರಾಮವನು ಆ ವರಾಂಗದ ನೇಮಿನಾಥ ದೇವರ
ಅಮೃತಪಡಿಗೂ ವರ್ದ್ಧಮಾನ ಭಟ್ಟಾರ – |
19 ಕ ದೇವರುಗಳ ಸಮುದಾಯದಾಹಾರದಾನಕ್ಕೆಯೂ ಸರ್ವಮಾನ್ಯವಾಗಿ
ಧಾರೆಯನೆಱದು ಕೊಟ್ಟು |
20 ಆ ವರಾಂಗ ಗ್ರಾಮದ ಚತುಸ್ಸೀಮೆಗೆ ಸಲುವ ನಾಲ್ಕು ಹೊಳೆಯ ನಡುವಣ
ಗದ್ದೆಬೆದ್ದಲು ತೋಟೆ ತು – |
21 ಟಿಕೆ ಹೊಱದೇವಸ್ವ ಸುಂಕಸುವರ್ಣ್ಣಾದಾಯ ನಿಧಿನಿಕ್ಷೇಪ ಜಲ ಪಾಷಾಣ
ಅಕ್ಷಿಣಿ ಆಗಾಮಿ ಸಿ – |
22 ದ್ಧ ಸಾಧ್ಯ ಅಷ್ಟಭೋಗ ತೇಜಸ್ವಾಮ್ಯ ಸಮಸ್ತ ಬಳಿಸಹವಾಗಿ ಸರ್ವ್ವಮಾನ್ಯವಾಗಿ
ಆ ಗ್ರಾಮವನು |
23 ಆ ಚಂದ್ರಾರ್ಕಸ್ಥಾಯಿಯಾಗಿ ನಡುವ ವರ್ದ್ದಮಾನ ಭಟ್ಟಾರಕ ದೇವರುಗಳಿಗೆ
ಧಾರಾಪೂರ್ವಕ – |
24 ದಿಂ ಧಾರೆಯನೆಱದು ಬರಸಿಕೊಟ್ಟ ಧರ್ಮ್ಮಶಾಸನ || ದೇವರಾಯ
ಮಹಾರಾಯರವೊಪ್ಪ ಶ್ರೀ ವಿರೂಪಾಕ್ಷ || 1 |
25 O ದಾನಪಾಲನಯೋರ್ಮ್ಮಧ್ಯೇ ದಾನಾದಾತ್ಪಾಲನಂ ವರಂ | ದಾನಾತ್ಸ್ವರ್ಗ್ಗ
ಮವಾಪ್ಪ್ನೋತಿ ಪಾಲನಾದಚ್ಯು – |
26 ತಂ ಪದಂ || ಸ್ವದತ್ತಂ ಪರದತ್ತಂ ವಾ ಯೋ ಹರೇತಿ ವಸುಂಧರಾ
ಷಷ್ಠಿರ್ವ್ವರ್ಷ ಸಹಸ್ರಾಣಿ ವಿಷ್ಠಾಯಾಂ |
27 ಜಾಯತೇ ಕ್ರಿಮಿ || ಪ್ರಿಯದಿಂದಿಂತಿದ ನೆಯದೆ ಕಾಯಿವ ಪುರುಷಂಗಾಯಂ
ಜಯಶ್ರೀಯು ಮ – |
28 ಕ್ಕುಮಿದಂ ಕಾಯಿದೆ ಕಾಯಿವಪಾಪಿಗೆ ಕುರುಕ್ಷೇತ್ರಂಗಳೊಳೆಳ್ಕೋಟಿ ಮುನೀಂ |
_________________________________________________________
1 Some space is left blank after this line.
|
\D7
|