1 ಶ್ರೀ ಗಣಾಧಿಪತಯೇಂನಮಃ ನಮಸ್ತುಂಗ ಶಿರ – |
2 ಶ್ಚುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ |
3 ನಗರಾರಂಭ ಮೂಲಸ್ತಂಭಾಯ ಶಂಭವೇ – |
4 ವೇ || ಸ್ವಸ್ತಿ ಶ್ರೀ ಜಯಾಭ್ಯುದಯ ಶಕವರುಷ |
5 1[2]25 ಸ್ವಭಾನು ಸಂವಛರದ ಫಾ – |
6 ಲ್ಗುಣ ಸು 1 ಆ ದಂದು ಶ್ರೀ ಮನ್ಮಹಾರಾಜಾಧಿ – |
7 ರಾಜ ರಾಜಪರಮೇಶ್ವರ ಶ್ರೀ ವೀರ ಹರಿಹರ ಮ – |
8 ಹಾರಾಯರ ವಿಜಯರಾಜ್ಯಾದ್ಭ್ಯು ದ – |
9 ಯದಲು ಮಹಾಬಳದೇವ ಒಡೆಯರು ಬಾ – |
10 ರಕೂರ ರಾಜ್ಯವನು ಪಾಲಿಸುವಲ್ಲಿ ಬ್ರಹ್ಮೊ . . |
11 ರ ಗ್ರಾಮದ ನಿಡುವಂಪಳ್ಳಿಯ ಅಧಿವಾಸದ |
12 ಅಹಿತಾಗ್ನಿ ದೇವಾಲ್ಯದ ಶಂಕರ ನಾರಾಯ – |
13 ಣ ದೇವರ ಸ್ಥಾನವನೂ ಕುಂಜುರಂಣ ಊಳ್ಳೂ – |
14 ರನು ಜಾತಂಣ ಉಪಾಧ್ಯ ಇಶ್ವರ ಊಳ್ಳೂರ – |
15 ನ ಕಯ್ಯಲು ಶ್ರೀ ವಿದ್ಯಾರಂಣ್ಯ ಶ್ರೀ ಪಾದಂ |
16 ಗಳ ಸಿಷ್ಯರು ಶಂಕರಾರಣ್ಯ ಶ್ರೀ ಪಾದಂ – |
17 ಗಳು ಧಾರಾಪೂರ್ವ್ವಕವಾಗಿ ಕೊಂಡ ಬಾಳ ಚ- |
18 ತು ಸ್ಸೀಮೆಯ ಮೂಡಲು ಇಶ್ವರ ಊ – |
19 ಳ್ಳೂರ ಪಂಡಿತನಗಡಿಇಂ ಪಡುವಲು ತೆಂ – |
20 ಕಲು ಪಂಡಿತನು ನಾರಾಯಣ ಊಳ್ಳೂರ – |
21 ನ ಗಡಿಇಂ ಬಡಗಳು ಪಡುವಲು ಹಂದಾ – |
22 ಡಿಯ ತಣ್ಣಂಜೆ ತೋ[ಟಂ] ಮೂಡಲು ಬ – |
23 ಡಗಲು ಜಾತಂಣ್ಣ ನಾರಣ ಉಳ್ಳೂರನ ಗಡಿ – |
24 ಇಂ ತೆಂಕಲು ಯಿಂತಿ ಚತುಸ್ಸೀಮೆ ಯೊಳ – |
25 ಗುಳ ಬಾಳಿಂದ ದೇವರ ಅಮ್ರುತಪಡಿಗೆ ಬಿಟ್ಟ |
26 ಬತ್ತ ಹಾನೆ 40 ಲಿ ಮೂಡಿ 24 ಶಂಕರ ಹೆ – |
27 ಬಾರು ತನ ಬ್ರಹ್ಮದಾಯದ ಮೂಲದ ಬಾ - |
|