|
South
Indian Inscriptions |
|
|
TEXT OF INSCRIPTIONS
10 ಲರು ಸಮಸ್ತ ಕೆಯ್ಯಲಿ ಹಿರಣ್ಯೋದಕ ಧಾರಾಪೂರ್ವ್ವಕವಾಗಿ ಮೂಲವನೆಱಸಿಕೊಂಡು
ಆಳುತಂವಿದ್ಧ ಮಲ್ಲರಸನ ಕಳಿಗೆ ಗಡಿ ಮೂಡಲು ಕುರಣೆಯ- |
11 ಲು ಗಡಿ ತೆಂಕಲು ಹರಿವ ವೊಳೆಗಡಿ ಪಡುವಲು ಬೆಸುಕೂರ ಬ್ರಾಹ್ಮರಗಡಿಯಲ್ಲಿ
ನಟ್ಟ ಕಲ್ಲು ಗಡಿ ಬಡಗಲು ಹರಿವ ಹೊ[ಳೆಗ]ಡಿ ಇಂತೀ ನಾಲ್ಕು ಗಡಿಯಿಂ- |
12 ದೊಳಗುಳ ಕಳಿಯನು ಅರ್ತ್ಥವನಿಕ್ಕಿ ಆಗರಗದ್ದೆ ತೆಂಗಿನ ಹಿತ್ತಿಲನು ಗೆಯಿಸಿ
ರೂಪುಮಾಡಿಸಿ ಆ ಸರ್ವ್ವಸ್ವಕ್ಕೆ ಕಟ್ಟಿಕೊಂಡ ಪಂಗ ಸೇನೇಶ್ವರ ದೇವರ |
13 ಅಮ್ರುತಪಡಿಗೆ ಕಂಚಿನ ಹಾ 40 ಲ್ಕೆದಲಿ ಅಕ್ಕಿಮು 9 ಕಂಚಲದೇವಿಗೆ ಕಂಚಿನ
ಹ 40 ಲ್ಕೆದಲು ಅಕ್ಕಿಮು 6 ಉಭಯಂ ಮು 15 ಅ- |
14 ಕ್ಕಿ ಯಿ ಕಂಚಿನ ಮು 15 ಅಕ್ಕಿಯ ಪಂಗವಲ್ಲದೆ ಅಕರ ಅನಾಯ ಕಾಣಿಕೆ ಖಡ್ಡಾಯ
ಬೀಡಿಗೆ ಬಿರಾಡ ಮುಂತಾದ ಆವವು ಪೊತ್ತರ |
15 ವಿಲ್ಲವೆಂದು ನಾಡು ನಕರದ ಮಧ್ಯಸ್ಥನಲ್ಲಿ ಕಟ್ಟನೂ ಸ್ಥಿತಿ ಕರಿಸಿಕೊಂಡು
ಬಾಳುತ್ತಂವಿದ್ದು ಸಂಕಣಸೇನಬೋವರು [ತಮಗೆ] ಧರ್ಮವಾಗ ಬೇ- |
16 ಕೆಂದು ತಂಮ ತಂದೆಗಳು ನಾರಣಸೇನಬೋವರ ಹೆಸರಲ್ಲಿ ನಡಸುವ ಬ್ರಾಹ್ಮಣ
ಭೋಜನಕ್ಕೆ ಸೇನೇಶ್ವರ ದೇವ[ರ ಬ]ಡಗದಿಕ್ಕಿನ ನಾರ- |
17 ಸಿಂಹದೇವರ ಎಡದ ಭಾಗದಲ್ಲಿಯ ಮನೆಠಾವಿಗೆ ಅರ್ತ್ಥಪರಿಚ್ಛೇದವಾಗಿ ಕೊಟ್ಟು
ಮೂಲ ಪರಿಚ್ಛೇದ [ಹಿರ]ಣ್ಯೋದಕ ಧಾರಾ- |
18 ಪೂರ್ವ್ವಕವಾಗಿ ತೆಱು ಬೆಡಿಗೆ ಯಿಲ್ಲದೆ ಸರ್ವ್ವಮಾನ್ಯವಾಗಿ ಮೂಲವಕೊಂಡು
ಚತುಸ್ಸೀಮೆ ವೊಳಗಾಗಿ ಪೊಗರವನು ಕಟ್ಟಿಸಿ . . . ಠಾವಿನಲ್ಲಿ ಮಠ- |
19 ವನು ಕಟ್ಟಿಸಿ ತಂಮ ಯಿಷ್ಟದೈವವಾದ ಗೋಪಿನಾಥ ದೇವರು ಮುಂತಾದ
ದೇವಪೂಜೆಗಳನು ಪ್ರತಿಷ್ಟಿಸಿ ಆ ಮಠದ . . . ಪೂಜೆಯ ಮಾ- |
20 ಡುವ ಅಡಿಗಳು ದೇವರಿಗೆ ನೈವೇದ್ಯವನು ಸಮರ್ಪ್ಪಿಸಿ ಅಲ್ಲಿ ಉಂಡಿಗೆಯನು ಬಿಡಿಸಿ
ಆ ಅಡಿಗಳು ಸಹಪ್ರತಿದಿ . . ಹಂನೆರಡು ಮಂದಿ |
21 ಅನ್ನಸತ್ರವನು ನಡಸಿ ಬಹರು ಯೀ ಶಾಸನಾಂಕಿತವಾದ ಹಂನೆರಡು ಮಂದಿಯ
ಅಂನಸತ್ರಕ್ಕೆ ವ[ರು]ಷ 1ಕ್ಕೆ ಕಂಚಿನ |
22 ಹ 40 ನೆಯ ಲ್ಕೆದಲೂ ಅಕ್ಕಿಮು 86 ಹ 16 ಸರ್ವ್ವಸ್ವಕ್ಕೆ ಕಟ್ಟಿದ ಪಂಗಲ ಪ್ರತಿ
ಅಕ್ಕಿ ಮು 15 ಉಭಯಂ ಪಂಗ ಸ- |
23 ಹ ಧರ್ಮಕ್ಕೆ ಬಿಟ್ಟ ಅಕ್ಕಿ ಮು 101 ಹ 16 ಅಕ್ಷರದಲೂ ನೂಱೊಂದು ಮೂಡೆಯ
ಹದಿನಾಱು ಹಾನೆ ಅಕ್ಕಿಯನು ಕಾ- |
24 ಲಂ ಪ್ರತಿಯಲೂ ಸಂಕಣಸೇನಬೋವರು ಅವರ ಸಂತತಿ ಪರಂಪರೆಯಾಗಿ ನಡಸಿ
ಮೇಲಾದ ಅನುಭವ |
25 ನೂ ಆ ಸಂಕಣಸೇನಬೋವರು ಅವರಸಂತತಿಯವರು ಬ್ರಹ್ಮಸ್ವವಾಗಿ ಬದಿಕಿ
ಬಹರು ಯೆಂದು ದೇವರಸವೊಡೆ- |
|
|
\D7
|