|
South
Indian Inscriptions |
|
|
TEXT OF INSCRIPTIONS
No. 200
(A. R. No. 574 of 1929-30)
AMBAḶAPĀḌI, UDIPI TALUK, SOUTH KANARA DISTRICT
Slab set up by the side of the east verandah in the prākāra of the
Janārdanasvāmin temple
Sadāśivarāya, 1570 A.D.
This record is dated Śaka 1493, Pramōdūta, Dhanus 4, Sunday,
corresponding to 1570 A.D., December 2, the weekday, however,
being Saturday. The Śaka year was current.
It registers endowments of land for the worship of land offerings
to god Janārdanadēva of Aṁbaḷapāḍi by Śrīdhara Niḍuṁbūra, who had
the temple of the above deity reconstructed after his return from
Rāmēśvara where he had been on pilgrimage. It states that on the date
Rāmakṛishṇappa-voḍeya was governing Bārakūru-rājya under the
orders of Rāmarāja-nāyaka of Keḷadi.
TEXT
1 ಶ್ರೀ ಗಣಾಧೀಪತಏ ನಮಃ[|*] ನಮಸ್ತುಂಗ ಶಿರಸ್ತುಂಬಿ ಚಂದ್ರಚಾಮರ ಚಾರವೇ
[|*] ತ್ರೈಲೋಕ್ಯ ನಗರಾರಂಭ ಮೂ- |
2 ಲ ಸ್ತಂಭಾಯ ಶಂಭವೇ [||*] ಸ್ವಸ್ತಿಶ್ರೀ ವಿಜಯಾದ್ಭುದಯ ಶಾಲಿವಾಹನ ಶಕವರುಶ
1492ನೆ [ಪ್ರ]ಮೋದೂತ ಸಂವತ್ಸರಕೆ ಸಲುವ ಧನುವಿನ |
3 ತಿಂಗಳು ನಾಕನೆ ಆದಿವಾರದಲು | ಶ್ರೀಮ್ಮಂ ಮಹಾಮಂಡಲೇಶ್ವರ | ರಾಜಾಧಿರಾಜ
ರಾಜಪರಮೇಶ್ವರ ಶ್ರೀವೀರ- |
4 ಪ್ರತಾಪ ಶ್ರೀ ಸದಾಶಿವ(|)ರಾಯರು | ವಿಜಯನಾಗರದ ಸಿಂಹ್ಮಾಸನದಲ್ಲಿ ಕುಳಿತು
| ಸುಖ ಸಕ್ತಥಾ1ಪ್ರಸಂ- |
5 ಗದಿಂ ರಾಜ್ಯಪ್ರತಿಪಾಲಿಸುವಾಗ | ಶ್ರೀ ರಾಯರ ನಿರೂಪದಿಂದ | ಕೆಳದಿಯ
ರಾಮರಾಜನಾಯಕ ಆಯಿಯ್ಯನವರು . [ಟ] ಕೆಳಗ |
6 ಣ ರಾಜ್ಯವ ಪ್ರತಿಪಾಲಿಸುವಾಗ ಆ ರಾಮರಾಜ ನಾಯಕ ಆಯಿಯನವರ
ನಿರೂಪದಿಂದ ರಾಮಕೃಷ್ಣಪ್ಪ ವೊಡೆಯರು ಬಾರಕೂರ ಸಿಂಹಾಸನದಲ್ಲಿ |
7 ಕುಳಿತು | ಧರ್ಮ[ವ ನಿ]ಯಮದಲ್ಲಿ | ರಾಜ್ಯವನಾಳುವಾಗ | ಆ ರಾಮಕೃಷ್ಣಪ್ಪ
ವೊಡೆಯರ ನಿರೂಪದಿಂದ ಬರದ[ಸಾ]ಸನದ ಕ್ರಮವೆಂತೆಂದರೆ | ಬ್ರಂ- |
8 ಹಕ್ಷತ್ರಿಯರು ಮಂಪಳ್ಳಿ . . ನಿಡುಂಬೂರರ | ಕುಮಾರ ಶ್ರೀಧರಾ ನಿಡುಂಬೂರರೂ|
ರಾಮೇಶ್ವರಕ್ಕೆ ತೀರ್ಥ- |
9 ಯಾತ್ರೆಗೆ ಹೋಗಿ ತೀರ್ಥಸ್ನಾನವಮಾದಿ | ತಿರುಗಿ ನಿಡುಂಬೂರಿಗೆಬಂದು
ಅಂಬಳಪಾಡಿಯ ಜನಾರ್ದನದೇವರ ದೇವಾಲ್ಯದ ಜೀರ್ನ್ನೋ- |
10 ಧಾರವಾಗಿ ಕಲಲಿಕಟಿಸಿ | ದೇವರಿಗೆ ನೆವೇದ್ಯ ನಿತ್ಯಶ್ರೀಬಲಿ ವಿನಯೋಗಕ್ಕೆ ಬಿಟ
ತಳದ ವಿವರ ಪಾ . ದೇವರಿಗೆ ಯಿರಿಸುವ ಅಕ್ಕಿ ತಳದ |
_____________________________________________________________
1 read ಸತ್ಕಥಾ or ಸಂಕಥಾ
|
\D7
|