|
South
Indian Inscriptions |
|
|
TEXT OF INSCRIPTIONS
13 . . ದ್ಯಕ್ಕಂ ದೇಸಿ ಪ್ರವಾಸಿಗಳ ಅನ್ನದಾನಕ್ಕಂ ನಾಯಕ ಲುಕುಮ1[ಣ್ಣ] . . |
14 ದೇವರ ವ್ರಿತ್ತಿಮ . . . ಗಂಡನಗಡಿಂಬದೋಳುತಾಂಬ್ರಸಾಸನಂ ಸಿಳಾಸಾಸನ – |
15 ಮಾಗಿಧಾರಾಪೂರ್ವ್ವಕಂ ಊರಿಂ ಬಡಗ ಕಲ್ಲುನಟ್ಟು ಅಳೆದಿಕ್ಕಿದ ಮ . . . |
16 ನಿಗಿರ ಮತ್ತರು 1 ನಿ . . ಗೆ ಮತ್ತರು 6 ದೇವರ ನಿವೇದ್ಯಕ್ಕಂ ಹಿರಿಯಕೆಱೆ[ಯ] |
17 [ವಾ]ಳೆಗದ್ದೆ ಕಮ್ಮ [2]25 ನಂದಾದೀವಿಗೆಗೆ ಬಿಟ್ಟಗಾಣ 1 ಹೂವಿನತೋಂಟ 1
ಇಂತೀ – |
18 ಕಲ್ನಟ್ಟು ಕೊಟ್ಟಂ[ತ] ವ್ವ ಧಮ್ಮಗಳ . . . ಮುಂದೇ ಕ್ಷೇತ್ರ ಬಾಧೆಗಳ ನೊನ್ದು |
19 ಮನಾಗಲೀಯದೆ ಪ್ರತಿಪಾಳಿಸುವ[ನ್ತ]ಪ್ಪ ಮಹಾಪುರುಷರ್ಗ್ಗೆ ಗಂಗೆ |
20 ವಾಣರಾಸಿಯ ತಡಿಯೊಳು ಸಹಸ್ರಕವಿಲೆಯ ಕೋಡುಂ ಕೊಳಗುಮಂ ಹೊನ್ನಲು |
21 ಕಟ್ಟಿಸಿ ಸಾಸಿರ್ವ್ವರುತ್ತಮ ಬ್ರಾಹ್ಮಣರ್ಗ್ಗೆ ಕಾಲಂ ಕ(ಕ)ರ್ಚ್ಚಿ ಧಾರಾಪೂರ್ವ್ವಕಂ
ಗೊಟ್ಟ ಫ – |
22 ಳಮಕ್ಕು ಹನ್ನೆರಡಗ್ರಹಾರಂಗಳ ಬಿಟ್ಟ ಫಳಮಕ್ಕು ಅದಲ್ಲದೆ ಇ ಧಮ್ಮಂಗಳ– |
23 ನಾವನು ಕಿಡಿಸಿದರಾದೊಡೆ ಗಂಗೆಯ ವಾಣರಾಸಿಯ ತಡಿಯೊಳು ಸಹ – |
24 ಸ್ರ ಕವಿಲೆಯ ತಲೆಯಂ ತನ್ನ ಸ್ವಹಸ್ತಿದಿಂದ ತಲೆಯಂ ಪಱೆಯಱೆದಂತಪ್ಪ ಮಹಾ |
25 ಬ್ರಹ್ಮೇತಿಸಾರ್ಗ್ಗು ಪನ್ನೆರಡಗ್ರಹಾರಮನಳಿದ ಮಹಾಪಾತಕನಕ್ಕು ಅಂತ – |
26 ಪ್ಪದನೆಱೆದು ಕಡಲೀಯದೆ ಧಮ್ಮಂಗಳಂ ಪ್ರತಿಪಾಳಿಸದರ್ಗ್ಗೆ ಅಕ್ಷಯಫಳ – |
27 ಮಕ್ಕು [||*] ಮಂಗಳಮಹಾ ಶ್ರೀ ಶ್ರೀ ಶ್ರೀ || ಸ್ವದತ್ತಂ ಪರದತ್ತಂ ತಾ ಯೋ |
28 ಹರೇತಿ ವಸುನ್ಧರಾಂ ಸಷ್ಟಿರ್ವ್ವರಿಶ ಸಹಸ್ರಾಣಿ ಮಿಷ್ಟಾಯಾಂ ಜಾಯತೇಕ್ರಿಮಿ [||*] |
|
No. 29
(A. R. No. 315 of 1935-36)
INDUKŪRU, KAMALAPURAM TALUK, CUDDAPAH DISTRICT
Slab from the ruins of the Śiva temple, now set up in the compound
of the âMugguru Akkalammaâ temple
[BhŪlŌkamalla], 1141 A.D.
This record registers a gift of land of a bell made to god
Bhōgēśvara of Indupura, the modern Indukūru, by mahāmaṇḍalēsvara Trailōkyamalla-Hemmāḍidēva-mahārāja.
It is dated the 54th regnal year of Bhūlōka, i.e., Chāḷukya
Bhūlōkamalla, Durmati, Paushya, śu. 11, Thursday, Uttarāyaṇa- __________________________________________________________________
1 The letter ಮ is engraved above the line.
|
\D7
|