|
South
Indian Inscriptions |
|
|
TEXT OF INSCRIPTIONS
64 ಮಹಾಮಂಡಲೇಶ್ವರ ಬೊಂಮಲದೇವಿಯರ ಕುಮಾರ ಇಂಮಡಿ ಭೈರರಸರು
ತಮಗಭ್ಯುದಯ ನಿ[ಚ]ಯ ಸಫಲ ಪ್ರಾಪ್ತಿ ನಿಮಿತ್ತವಾಗಿ ವರಾಂಗ ಮಹಾಸ್ಥಾನ |
65 ಶ್ರೀ ನೇಮತೀರ್ಥ್ಥೇಶ್ವರ ಚೈತ್ಯಾಲಯದತಾಮ್ರದ ಹೊದಕೆಯ ತುದಿ . ಯ
ಆದಿನಾಥ ಸ್ವಾಮಿಗಳ ಪೂಜೆಗೆಬಿಟ್ಟ ಗ್ರಾಮದ ಧರ್ಮ್ಮಶಾಸನ ಭಾಷಾಕ್ರಮವೆಂತೆಂದ- |
66 ಡೆ . ನಾವು ಕೆಲವಸೆಯ ಸಿಂಹಾಸನವನಾಳುವಂತಿರಲು ನಂಮ ಸೀಮೆಯೊಳಗೆ
ಸೋದಿಯಿಂದ ಪಡುವಲು | ಮುಂ . . ಲ್ಲಿಂದ ಬಡಗಲು ಮೊರಗ . . . |
67 ದ ಮೂಡಲು ಸಿರುಕಾಲಿಂದ ತೆಂಕಲು ಇಂತೀಚತುಃ ಸೀಮೆಇಂದೊಳಗಾದ [ಶು]
. ಜೆಯ ಹರಿವರಿಯ ನಾ ಭೈರವಪುರವೆಂಬ ನಾಮಾಂಕಿತವನುಮಾಡಿ [ಆ] – |
68 ದಿ ತೀರ್ತ್ಥಂಕರನ ಪೂಜೆಗೆ ಧಾರಾಪೂರ್ವ್ವಕವಾಗಿ ಬಿಟ್ಟವು ಆ ಗ್ರಾಮದಲುಳ
ಕೆಲವಸೆಯ ಮಹಾದೇವರ ದೇವಸ್ವದ ಯೆರಡು ಗದ್ದೆಯ ನುಳಿದು ಗದ್ದೆಹೊಲಹಲ- |
69 . . ತೆಂಗು ಜಲಪಾಷಾಣ ಅಕ್ಷೀಣಿ ಆಗಾಮಿ ನಿಧಿನಿಕ್ಷೇಪ ಸಿದ್ಧಸಾಧ್ಯಂಗಳೆಂಬ
ಭೋ[ಗಂ]ಗಳನು ಅನುಭವಿಸಿ ಬಹುಹಾಂಗೆ ನಂಮ ಸ್ವರುಚಿಯಿಂದ |
70 ಕೊಟ ಧರ್ಮ್ಮಶಾಸನ | ಆ ದೇವರ ಅಭಿಷೇಕ ಪೂಜೆ ನಿತ್ಯನೈಮಿತ್ತಿಕ ದೀಪಾಳಿಗೆ
ಯಲಡಯ ಪೂಜೆಗೆ ಸಹ ಖಂಡುಗದ ಮೂಡೆ 90 ಅಕ್ಷರದಲು ತೊಂಭ – |
71 ತ್ತನು . . ಭಂಡಾರಿ . [ಆ]ದಾಯವನ್ನು || ಆ ವರಾಂಗದಾಚಾರ್ಯ್ಯರೆ ಅನುಭವಿಸಿ
ಬಹರು ಆ ವರಾಂಗದ . ನಶಾಲೆಯ . . . . ಗಳಿಗೆ ಆ – |
72 ಹಾರದಾನಕ್ಕೆ ಬಿಟ್ಟತೋಟದ ಕ್ರಮವೆಂತೆಂದೊಡೆ ನಂಮ ಮೇಲು ಸೀಮೆಯ
ಕೆಱಿಯೆಂಬ . . ರೊಳಗೆ ಕೊದುರೆಗಡಿ . . . . . . . |
73 . . . . . . . . . ಲಿಂದಮೂಡಣ . . ಗಳು ಪರ್ಯ್ಯಂತರ 5000 ಅಡಕೆಯ ಮರನು
ಅಕ್ಷರದಲು [ಅ]ಯಿದು ಸಾವಿರ ಮರ . . . . |
74 ಚಿಯಿಂದ ಬಿಟ್ಟು ಕೊಟ್ಟಿಲು || - * - || ದಾನಪಾಲನಯೋರ್ಮ್ಮಧ್ಯೇ
ದಾನಾಛ್ಛ್ರೇಯೋನುಪಾಲನಂ | ದಾನಾತ್ಸ್ವರ್ಗ್ಗಮವಾಪ್ನೋತಿ ಪಾಲನಾ ದಚ್ಯುತಂ
ಪದಂ || |
75 ಸ್ವದತ್ತಾಂ ಪರದತ್ತಾಂ ವಾ ಯೋ ಹರೇಚ್ಚ ವಸುಂಧರಾಂ | ಷಷ್ಟಿರ್ವ್ವರ್ಷ
ಸಹಸ್ರಾಣಿ ವಿಷ್ಟಾಯಾಂ ಜಾಯತೇ ಕ್ರಿಮಿಃ || ಆದಿತ್ಯಚಂದ್ರಾವನಿಲೋ[ನಲಶ್ಚ] |
76 ದ್ಯೌರ್ಭ್ಭೂಮಿರಾಪೋ ಹೃದಯಂ ಮನುಶ್ಚ [|*] ಅಹಶ್ಚ ರಾತ್ರಿಶ್ಚ ಉಭೇಚ ಸಂಧ್ಯೇ
ಧರ್ಮ್ಮಶ್ಚ ಜಾನಾತಿ ನರಸ್ಯ ವೃತ್ತಿಂ || ಇಂತಿವರು ಸಾಕ್ಷಿಗಳು . . . . |
77 . ಜೈನರಾಗಿ ತಪ್ಪಿದವರು ಇಪ್ಪತ್ತನಾಲ್ಕು ತೀರ್ತ್ಥಂಕರ ದೇವರುಗಳನು ಕಿತ್ತಪಾಪಕೆ
ಹೋಹರು | ಶೈವರಾಗಿ ತಪ್ಪಿದವರು ಕೋಟಿಲಿಂಗಗಳನು . . . . |
78 ಪಕೆ ಹೋಹರು | ವೈಷ್ಣವರಾಗಿ ತಪ್ಪಿದವರು ಗಯಾ ವಾರಣಾಸಿಯಲ್ಲಿ ಕೋಟಿಗೋ
ಬ್ರಾಹ್ಮಣ ವಧಿಸಿದ ಪಾಪಕೆ ಹೋಹರು | . . ಸ್ವಸ್ತಿ ಶ್ರೀ . . |
79 . ವಂಶೋದ್ಭವ ಬೊಂಮಲದೇವಿಯರ ಕುಮಾರ ಇಂಮಿಡಿ ಭೈರವೇಂದ್ರನ
ಸ್ವಹಸ್ತದ ವೊಪ್ಪ || ವರ್ದ್ಧತಾಂ ಜಿನಶಾಸನಂ || |
80 ಶ್ರೀ ವೀತರಾಗಾಯ ನಮಃ |
|
|
\D7
|