|
South
Indian Inscriptions |
|
|
TEXT OF INSCRIPTIONS
TEXT
1 ಶ್ರೀ ಮತು | ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ [|*] ತ್ರೈಲೋಕ್ಯ
ನಗ- |
2 ಠಾರಂಭ ಮೂಲಸ್ತಂಭಾಯ ಸಂಭವೇ || ಸ್ವಸ್ತಿ ಶ್ರೀಮತು ಶಕವರ್ಷ 1307 ನೆಯ |
3 ಕ್ರೋಧನ ಸಂವತ್ಸರದ ಕಾರ್ತ್ತಿಕಮ ಸು 1 ಆದಿವಾರದಂದು ಶ್ರೀಮತು
ಅರಿರಾಯ ಗ- |
4 ೦ಡರ ದಾವಣಿ ಹುಸಿವರಶೂಲ ಶರಣಾಗತ ವಜ್ರಪಂಜರ ಮಱಿಹೊಕ್ಕರ ಕಾವ- |
5 ರುಮಪ್ಪ ಶ್ರೀವೀರ ಚೆಂದರ್ಸವೊಡೆಯರು ಸಾಂಬ್ರಾಜ್ಯವನಾಳುವಲ್ಲಿ ಕೋಟಿಸೆಟ್ಟಿ
ಯಾ- |
6 ದ ಬಿಂನಾಣಿ ಮಿಯಾರು ಸಾರತ್ತೂರು ಏಳುಬಳಿ ಕೋಟಿನಲ್ಲಿಯಾದ ಹೆಗ್ಗೆಡೆ ಬಂಕಿ
ಪಾ- |
7 ಡಿ ಕಾರರಾದ ಅ[ರೆ]ಇನಣ್ನಸಲಿಕೆ ಎಂಟು ಪ್ರಜೆ ಮುಂತಾಗಿ ಮಿಯರಲು ವಿಕ್ರಾಂತ- |
8 ಸೆಟ್ಟಿಯ ಬಳಿಯ ನೋಟದ ನಾರಣ ಸೆಟ್ಟಿ ಅವರಳಿಯ ವೋಣಿ ಸಾಂತಯ ತಂಮ
ಬ್ರ- |
9 ಹ್ಮದಾಯ ನನೂಂ ಬ್ರಹ್ಮಿಸೆಟ್ಟಿಯ ಮೂಡಣ ಕಟ್ಟ ತಿಲಡ ಬಯಲು ಪಡೆಯಂ ಬೆ- |
10 ಟ್ಟು ಇ ಭೂಮಿಯ ಚತುಸ್ಸೀಮೆ ಕ್ರಮ ಮೂಡಲು ಮಿಯರ ಮೂಡರ ಸೀಮೆಯ
ಯೆಳೆ ಇಂ |
11 ಪಡುವಲು ಹೆಬ್ಬಾರ್ವ್ವನ ಬೆಟ್ಟಿನ ವೋಜಿತನಕ ತೆಂಕಲು ದರಿವಾಣಂತಾಯನ
ಬೆಟ್ಟಿನ |
12 ಜಿ ಇಂದಬಡಗಲು ಮಿಯರ ವೋಜಿ ತನಕ ಯಿ ಭೂಮಿಗೆ ತೆಱು ಸಿದ್ಧಾಯ ದುಕ್ಖ- |
13 ವೊಸಗೆ ಬೆಡುಗುಳು ಮೊದಲಾಗಿ ಸರ್ವ್ವಮಾನ್ಯವೆಂದು ಶಾಸನವನ್ನಿಕ್ಕಿ ಕೊಟ್ಟರು
ಯಿ ಭೂ- |
14 ಮಿ ಯೊಳಗುಳ್ಲ ಜಲಪಾಷಾಣ ನಿಧಿನಿಕ್ಷೇಪ ಏನುಳ್ಳದನು ಭೋಗ್ಸಿ ಆ ಮಿಯರ
ಶ್ರೀಮ- |
15 ಹಾದೇವರ ಅಮ್ರಿತಪಡಿಗೆ ಹಾನೆ 30 ಲೆಕ್ಖದಲು 40 ಮೂಡೆ ಭತ್ತವನು ನಡಿಸಿ
ಆ ನೋ- |
16 ಟದ ನಾರಣನೂ ವೋಣಿ ಸಾಂತಯನೂ ತಂಮ ಸಂತಾನಊ ಆ ಚಂದ್ರಾರ್ಕ್ಕ
ಸ್ಥಾ ಇಗಳಾ- |
17 ಗಿ ಬಾಳುವರು ಇ ಸೀಮೆಯೊಳಗೆ ಅಟ್ಟುಂತೋಡಿ ಅಮ್ಮಲತಿ ಕಿಂಗೊಡ ಕೊಡಾಂಜಿ
ಮೊ- |
18 ದಲಾಗಿ ಸಲ್ಲದು ಇ ಸೀಮೆಯೊಳಗೆ ಅರೆಕಿತ್ತವಂಗೆ 500 ನೆರೆ ಕಿತ್ತವಂಗೆ 1000 ಎಂ- |
19 ಬಡಕ ಈ ಧರ್ಮ್ಮವನು ಪಾಲಿಸಿದವರಿಗೆ ವಾರಣಾಸಿಯಲು 1000 ಕವಿಲೆಯನು |
20 ದಾನವಕೊಟ್ಟ ಫಲವನೆಯ್ದುವರು ಈ ಧರ್ಮ್ಮವನಳಿದವರು ಕಾಶಿಯಲು ಸೂರ್ಯ್ಯ
ಗ್ರ- |
21 ಹಣದಲು 1000 ಕವಿಲೆಯನು ಕೊಂದ ಪಾಪವನೆಯ್ದುವರು || ದಾನ ಪಾಲನಯೋರ್ಮ್ಮ- |
22 ಧ್ಯೇ ದಾನಚ್ರ್ಪೇಯೋನುಪಾಲನಂ [|*] ದಾನಾತ್ಸ್ವರ್ಗ್ಗಮವಾಪ್ನೋತಿ ಪಾಲನಾ
ದಚ್ಯು- |
23 ತಂ ಪದಂ || ಅರಸಿನೊಪ್ಪ ಕಳಶನಾಥ || ಮಂಗಳ ಮಹಾ ಶ್ರೀ ಶ್ರೀ |
|
|
\D7
|